ಪಿಸುಗುಡಲೇ ಸವಿ ಮಾತೊಂದಾ / Pisugudale Savi Maathonda
ಕನ್ನಡದಲ್ಲಿ:
ಸಂಗೀತ: ಎಮಿಲ್ಗಾಯನ: ಸೋನು ನಿಗಮ್
ಚಲನಚಿತ್ರ: ಸರ್ಕಸ್
ಪಿಸುಗುಡಲೇ ಸವಿ ಮಾತೊಂದಾ
ಕದ್ದು ಕೊಡಲೇ ಹೂ ಮುತ್ತೊಂದಾ
ಒಲವಿನಾ ಸಲಿಗೆಗೆ, ಮನ ಕುಣಿಯುತಿದೆ
ಹೇಳಿಬಿಡು ಮಿತಿಮೀರಲು
ನಾ ಬೇಡುವೆನು
ಹೇಳಬೇಡ ಸುಮ್ಮನಿರಲು
ನನ್ನ ಮುಂದೆ ಹಾಡದೇನೆ
ಮುಚ್ಚಿಕೊಂಡೆ ನಿನ್ನ ಗೀತೆ
ತಪ್ಪುತ್ತಿತ್ತೆ ನಿನ್ನ ಎದೆ ತಾಳ
ನನ್ನ ಜೊತೆಜೊತೆಯಲ್ಲೆ
ಮೆಲ್ಲ ಮೆಲ್ಲ ಸಾಗುತಲೆ
ಏಕೆ ಬಚ್ಚಿ ಇಟ್ಟೆ ಮನದಾಳ
ಇಷ್ಟು ಕಾಯಬೇಕೇ...
ನಲುಮೆಗೆ ಬಾಯಿ ಬರಲು
ಕನಸಿನಾ ಕಣಿವೆಗೆ, ಮನ ಇಳಿಯುತಿದೆ
ಹೇಳಬೇಡ ಸುಮ್ಮನಿರಲು
ಪಿಸುಗುಡಲೇ... ಸವಿ ಮಾತೊಂದಾ...
ನೂರ ಎಂಟು ಆಸೆಗೆಲ್ಲ
ಕೋಟಿ ಕೋಟಿ ಬಣ್ಣಗಳ
ಕನಸಿನ ಅಂಗಿಯ ತೊಡಿಸಿ
ಕಣ್ಣು ಕಣ್ಣು ಸೇರಿದಾಗ
ಮೌನವೆ ಮಾತಾಡುವಾಗ
ಎಲ್ಲವನ್ನು ಹೇಳಬೇಕೆ ಬಿಡಿಸಿ
ಕಪ್ಪು ಕಣ್ಣಿನಲ್ಲೆ...
ಒಪ್ಪಿಬಿಡು ಅಪ್ಪಿಕೊಳ್ಳಲು
ಚೆಲುವಿನಾ ಸುಲಿಗೆಗೆ, ಮನ ಬಯಸುತಿದೆ
ಹೇಳಬೇಡ ಸುಮ್ಮನಿರಲು
ಪಿಸುಗುಡಲೇ ಸವಿ ಮಾತೊಂದಾ
ಕದ್ದು ಕೊಡಲೇ ಹೂ ಮುತ್ತೊಂದಾ
ಒಲವಿನಾ ಸಲಿಗೆಗೆ ಮನ ಕುಣಿಯುತಿದೆ
ಹೇಳಿಬಿಡು ಮಿತಿಮೀರಲೂ
ನಾ ಬೇಡುವೆನು, ನಾ ಬೇಡುವೆನು
ಹೇಳಬೇಡ ಸುಮ್ಮನಿರಲು
In English:
Music: EmilSinger: Sonu Nigam
Movie: Circus
Pisugudale savi maathonda
Kaddukodale hoo mutthonda
Olavina saligege, mana kuniyuthide
Helibidu mithimiralu
Naa beduvenu
Helebeda summaniralu
Nanna munde haadadene
Mucchi konde ninna geethe
Tapputhitte ninna yede taala
Nanna jothe jothe yalle
Mella mella sagutale
Yeke bachhi itte Manadaala
Ishtu kaayabeeke...
Nalumege baayi baralu
Kanasina kanivege, mana iliyutide
Helabeda summaniralu
Pisugudale... Savi maathonda...
Noorayentu aasegella
Koti koti bannagala
Kanasina aangiya thodisi
Kannu kannu seridaaga
Mounave maataduvaga
Ellavannu helabeke bidisi
Kappu kanninale...
Oppibidu appikollalu
Cheluvina suligege, mana baayasuthide
Helabeda summaniralu
Pisugudale savi maathonda
Kaddukodale hoo muthonda
Olavina saligege mana kuniyuthide
Helibidu mithimiralu
Naa beduvenu, Naa beduvenu
Helebeda summaniralu
ಅದ್ಭುತ ಲಿರಿಕ್ಸ್
ReplyDelete